Friday, 16 June 2017

ಪ್ರಶ್ನೆ ...ಉತ್ತರ

" ಅಪ್ಪ.. ಅಪ್ಪಾ... ಇದು ಏನಿದು?... "
"ಅದು ಒಂದು ಅಬಜ್ಜಿ... ಒಂದು ಹುಳ ..."
"ಯಾವ ಹುಳ ಅಪ್ಪಾ... "
" ಅದೊಂದು ಕಂಬಳಿ ಹುಳ .... ಮೈಯಲ್ಲೆಲ್ಲಾ ರೋಮದ ತರಹ ಮುಳ್ಳಿದೆಯಲ್ಲಾ ...ಅದನ್ನಾ ಕಂಬಳಿ ಹುಳ ಅಂತಾರೆ...."
" ಅದು ಏನು ಮಾಡುತ್ತೆ?..."
" ಅದು ಎಲೆಯಲ್ಲಾ ತಿಂದು ದೊಡ್ಡದಾಗಿ ಆಮೇಲೆ ಚಿಟ್ಟೆಯಾಗುತ್ತೆ.... ..."
"!!!????    ಅದು ಹೇಂಗೆ ಚಿಟ್ಟೆಯಾಗುತ್ತೆ....?"
" ಅದೂ ಕಂಬಳಿ ಹುಳ ದೊಡ್ಡದಾಗಿ ಆಮೇಲೆ ಕೋಶ ಆಗಿ ಆಮೇಲೆ ಚಿಟ್ಟೆ ಆಗುತ್ತೆ...."
" ಅಪ್ಪಾ ಈ ಹುಳ ಒಳ್ಳೇದಾ ...? ಕೆಟ್ಟದ್ದಾ...?
"ಇಲ್ಲ ಮಾರಾಯ... ಅದೇನು ಮಾಡುದಿಲ್ಲ.... ಗಲೀಜು ಅಷ್ಟೇ... "
"ಒಳ್ಳೇದಾ ...? ಕೆಟ್ಟದ್ದಾ...?"
"ಏ ಮಾರಾಯಾ .... ಅದೂ ನಮಗೇನೂ ಕಚ್ಚುದಿಲ್ಲಾ ...ಆದರೆ ಅದು ಎಲೆಯಲ್ಲಾ ತಿನ್ನುತ್ತಲ್ಲಾ ...ಹೂವಿನ ಗಿಡ, ತರಕಾರಿ ಗಿಡ ಎಲ್ಲ ತಿನ್ನುತ್ತೇ .... ತರಕಾರಿ ಗಿಡನೆಲ್ಲೇ ಹಾಳು ಮಾಡುತ್ತೆ... "
"ಒಳ್ಳೇದೇ... ಆದ್ರೆ ಸ್ವಲ್ಪ ಕೆಟ್ಟದ್ದು ಅಲ್ವ.... " 
" ಹೌದು ಮಾರಾಯ.... ನೀನೇ ಸರಿ... "
" ಅಪ್ಪಾ... ಅದು ಎಲೆಯಲ್ಲ ಹೇಗೆ ತಿನ್ನತ್ತೆ.... ಅದಕ್ಕೆ ಹಲ್ಲಿದೆಯಾ.... "
" ಹೌದೋ .. ಅದಕ್ಕೆ ಹಲ್ಲಿನಹಾಗೆ ಒಂದು ಬಾಯಲ್ಲಿ ಒಂದು ಕೊಂಬು ಇರುತ್ತೆ... ಅದರಿಂದ ಎಳೆಯನ್ನ ಕಟ್ ಮಾಡಿ ತಿನ್ನತ್ತೆ..."
" ಕೊಂಬ್ ಅಂದ್ರೆ...?.... "
"ನೋಡು ಹೀಗೆ ಇರುತ್ತೆ.... " ಎಂದು ಕೈ ಯ ಹೆಬ್ಬೆರಳು- ತೋರುಬೆರಳನ್ನು ಬಾಗಿಸಿ ತೋರಿಸಿದೆ.
"ಅಪ್ಪಾ ಚಿಟ್ಟೆಗೂ ಹಲ್ಲಿರುತ್ತಾ.... ??? ಚಿಟ್ಟೆ ಏನು ತಿನ್ನತ್ತೆ....?"
"ಚಿಟ್ಟೆಗೆ ಹಲ್ಲಿರುದಿಲ್ಲ .... ಚಿಟ್ಟೆ ಹೂವಿನ ಮಕರಂದ ಕುಡಿಯುತ್ತೆ... ನೀನು ನೋಡಿಲ್ವಾ ಚಿಟ್ಟೆ ಹೂವಿಂದ ಹೂವಿಗೆ ಹಾರುತ್ತ ಇರುತ್ತಲ್ಲವಾ... ಅದಕ್ಕೆ ಮಕರಂದ ಕುಡಿಯಲಿಕ್ಕೆ ಒಂದು ಸ್ಟ್ರೋ ಇರುತ್ತೆ .... "
"ಸ್ಟ್ರೋ ಹೇಗಿರುತ್ತೆ....? " 
" ಏ  ಮಾರಾಯಾ !!! ನಿನ್ ಯಕ್ಷ ಪ್ರಶ್ನೆ ಮುಗಿಯುದೇ ಇಲ್ವಾ....?" ಅಂತಾ ಹೇಳಿ ಚಿಟ್ಟೆಯ ಫೋಟೋ ತೋರಿಸುತ್ತಾ ..." ನೋಡಿಲ್ಲಿ ಈ ಕಾಯಿಲ್ ತರ ಇದೆಯಲ್ಲಾ ಇದೇ ಸ್ಟ್ರೋ....ಗೊತ್ತಾಯ್ತಾ .... "
" ಹೌದಾ.. ಅಪ್ಪಾ.. ನಮ್ಮನೆಯಲ್ಲಿ ತುಂಬಾ ತುಂಬಾ ಹೂವಿನ ಗಿಡ ಬೆಳೆಸುವ... ಆಗ ತುಂಬಾ ಚಿಟ್ಟೆ ಬರುತ್ತೆ ಅಲ್ವಾ ...."

ನಾಲ್ಕು ವರ್ಷದ ಮಗನೆ ಕುತೂಹಲದ ಪ್ರಶ್ನೆಗಳು.... ಉತ್ತರ ಸಿಕ್ಕಿದ ಸಂತೋಷ ಅವನಿಗಾದರೆ ಪ್ರಕೃತಿ ಬಗ್ಗೆ ಒಂದಿಷ್ಟು ತಿಳಿಸಿದ ಸಮಾಧಾನ ನನಗೆ.... ಪ್ರಶ್ನೆಗೊಂದು ಉತ್ತರವಾದರೆ ಉತ್ತರದಿಂದಲೇ ಪ್ರಶ್ನೆ....