ರಾಷ್ಟ್ರ ಲಾಂಛನಕ್ಕೊಂದು ಸೆಲ್ಯೂಟ್....
ಸೆಪ್ಟೆಂಬರ್ ತಿಂಗಳ ಒಂದು ಸಂಜೆ. ಆಗಷ್ಟೆ ಮಳೆಗಾಲ ಮುಗಿದಿತ್ತು. ಆಕಾಶ ಸ್ವಚ್ಛವಾಗಿತ್ತು...ಮಳೆಬರುವ ಸಾಧ್ಯತೆ ಕಮ್ಮಿ ಇತ್ತು. ಫೋಟೋ ತೆಗಿಯೋಣ ಎಂದು ಕ್ಯಾಮರಾ ತೆಗೆದು ಹೊರನಡೆದೆ. ಹಾಗಂತ ನಾನೇನು ಛಾಯಾಗ್ರಾಹಕನಲ್ಲ...ಹೊಸದಾಗಿ ಖರೀದಿಸಿದ ಕ್ಯಾಮರಾದಿಂದ ಆಗೊಮ್ಮೆ ಈಗೊಮ್ಮೆ ಫೋಟೋ ತೆಗೆಯುತ್ತಿದ್ದೆ...ಪ್ರಕೃತಿ ಹಾಗೂ ಪಕ್ಷಿಗಳ ವೀಕ್ಷಣೆ ಮತ್ತು ಫೋಟೋಗ್ರಾಫಿಯಲ್ಲಿ ಸ್ವಲ್ಪ ಆಸಕ್ತಿ. ಮುಂಚಿನ ದಿನವಷ್ಟೇ ಸಾಕಷ್ಟು ಹಕ್ಕಿಗಳನ್ನು ನೋಡಿದ್ದ ಜಾಗಕ್ಕೆ ಆಕ್ಟೀವಾ ಓಡಿಸಿಕೊಂಡು ಹೊದೆ. ನನ್ನ ನಿರೀಕ್ಷೆ ಹುಸಿಯಾಯಿತು. ಕಾಗೆಗನ್ನು ಬಿಟ್ಟರೆ ಬೇರೆ ಹಕ್ಕಿಗಳೇ ಕಾಣಿಸುತ್ತಿಲ!!್ಲ...ಕಾಗೆಗಳಂತೂ ತುಂಬಾ ಸಂಖ್ಯೆಯಲ್ಲಿದವು. ನಿರಾಸೆಯಾಯಿತು. ಸರಿ, ಇನ್ನೊಂದೆಡೆ ಹೋಗೋಣವೆಂದು ಹತ್ತಿರದ ಬಯಲು ಪ್ರದೇಶಕ್ಕೆ ಹೋದೆ. ಅಲ್ಲಿಯೂ ಹಕ್ಕಿಗಳು ವಿರಳವಾಗಿದ್ದವು. ಹಕ್ಕಿಗಳು ಅಂದಿನ ದಿನಚರಿಯನ್ನು ಬೇಗನೇ ಮುಗಿಸಿ ಗೂಡು ಸೇರಿರಬೇಕು.! ಛೆ! ಇವತ್ತು ಹೊರಬಂದ ಟೈಮೇ ಸರಿಯಿಲ್ಲ ಅಂದುಕೊಂಡೆ. ನೆಲದಮೇಲೆ ಹುಲ್ಲಿನ ಮಧ್ಯೆಯಲ್ಲಿ ಚಿಕ್ಕ ಚಿಕ್ಕ ಹೂಬಿಟ್ಟ ಗಿಡಗಳು ಕಾಣಿಸಿದವು..ಆ ಹೂವುಗಳು ಮುಸ್ಸಂಜೆಯಲ್ಲಿ ಅರಳುವ ಹೂವಾಗಿದ್ದರಿಂದ ತಾಜಾ ಆಗಿದ್ದವು...ಫೋಟೋ ತೆಗೆಯುತ್ತಿದ್ದೆ...ಆ ಹೂವುಗಳು ಚಿಕ್ಕದಾಗಿದ್ದರೂ ಸುಂದರವಾಗಿದ್ದವು. ಮಳೆಗಾಲದಲ್ಲಿ ಬೆಳೆಯುವ ಈ ಸಸ್ಯಗಳ ಹೂವು ಅರಳುವುದು ಮುಸ್ಸಂಜೆಯಲ್ಲಿ...ಆ ಸಮಯದಲ್ಲಿ ಸೂರ್ಯನ ಬೆಳಕು ಪ್ರಕಾಶಮಾನವಾಗಿರುವುದೇ ಅಪರೂಪ... ಇವತ್ತೂ ಇದೇ ಸಮಸ್ಯೆ...ಒಂದೈದು ನಿಮಿಷದಲ್ಲಿ ಪಶ್ಚಿಮಯಲ್ಲಿ ಮೇಲೇರಿದ ಮೋಡ ಇಡೀ ಸೂರ್ಯನನ್ನು ನುಂಗಿಯೇ ಬಿಟ್ಟಿತು.! ಫೋಟೋ ತೆಗೆಯಲು ಬೆಳಕು ಕಡಿಮೆಯನಿಸಿತು...ತೆಗೆದ ಫೋಟೋ ಸಹ ಮಬ್ಬಾಗಿ ಬರುತ್ತಿತ್ತು...ಅದೃಷ್ಟವನ್ನು ಹಳಿಯುತ್ತಾ ಮನೆಯಕಡೆಗೆ ಹೆಜ್ಜೆಹಾಕಿದೆ. ಅಚಾನಕ್ ತುಂಡು ಮೋಡ ಬದಿಸರಿದು ಸೂರ್ಯದೇವನನ್ನು ಬಂಧಮುಕ್ತವಾಗಿಸಿತು..!! ಸಿಟ್ಟಿನಿಂದ ಸೂರ್ಯಬಿಟ್ಟ ಕೆಂಗಣ್ಣಿನಿಂದಲೋ ಅಥವಾ ಸೂರ್ಯನನ್ನು ಅಡ್ಡ ಮಾಡಿದ ತಪ್ಪಗೆ ನಾಚಿಯೋ ಎನೋ, ಸೂರ್ಯನ ಸುತ್ತುವರಿದ ಮೋಡವೆಲ್ಲಾ ಕೆಂಪಣ್ಣಕ್ಕೆ ತಿರುಗಿತ್ತು.!!! ಪಡುವಣದಲ್ಲಿ ಮೋಡಗಳಿಂದ ವಿಧವಿಧವಾಗಿ ಮೂಡಿದ ಚಿತ್ರಣಗಳು ಅದ್ಭುತವಾಗಿತ್ತು....ಖುಷಿಯಾಯಿತು..ಸೂರ್ಯಾಸ್ತದ ಫೋಟೋ ತೆಗೆಯಲು ಶುರುಮಾಡಿದೆ..ಬೇರೆ ಬೇರೆ ಸೆಟ್ಟಿಂಗ್‍ಗಳಲ್ಲಿ ಫೋಟೋ ಕ್ಲಿಕ್ಕಿಸಿದೆ...ಮುಂಬದಿಯಲ್ಲಿ ಬೇರೆ ಬೇರೆ ಮರಗಳನ್ನಿಟ್ಟಕೊಂಡು ಫೋಟೋ ಜೋಡಿಸಿದೆ...ಹಕ್ಕಿಗಳ ಫೋಟೋ ಅಲ್ಲವಾದರೂ ಸೂರ್ಯಾಸ್ತದ ಫೋಟೋ ಸಿಕ್ಕಿತ್ತಲ್ಲಾ ಎಂದು ಖುಷಿಪಟ್ಟೆ.. ಸೂರ್ಯನಿಗೆ ಅಡ್ಡಬಂದ ಮೋಡಕ್ಕೂ, ಮೋಡಕ್ಕೆ ಕೆಂಬಣ್ಣ ಎರೆಚಿದ ಸೂರ್ಯನಿಗೂ ಥ್ಯಾಕ್ಸ್ ಹೇಳಿದೆ. ಮನೆಗೆ ಬಂದು ಫೋಟೋಗಳನ್ನು ಕಂಪ್ಯೂಟರ್‍ನಲ್ಲಿ ನೋಡುವ ತವಕ...ಅದರಲ್ಲಿ ಒಂದು ಫೋಟೋ ಮಾತ್ರ ವಿಶಿಷ್ಟವಾಗಿ ಕಂಡುಬಂತು...ಫೋಟೋವನ್ನು ಸ್ವಲ್ಪ ತಿರುಗಿಸಿದಾಗ ತುಂಡುಮೋಡದ ಒಂದು ಬದಿಯಲ್ಲಿ ರಾಷ್ಟ್ರ ಲಾಂಛನವೇ ಮೂಡಿತ್ತು.!!! ಕೂಡಲೇ “ಜೈಹಿಂದ್” ಎಂದು ಸೆಲ್ಯೂಟ್ ಮಾಡಿದೆ.!!! ಲಾಂಛನ ಹಿಂದಿದ್ದ ಸೂರ್ಯನ ಕಿರಣಗಳಿಂದ ಲಾಂಛನವೇ ಬೆಳಕನ್ನು ಸೂಸುವಂತೆ ಕಾಣಿಸುತ್ತಿತ್ತು.!!! ಆಹಾ! ಎಂತಹಾ ಅದ್ಭುತ ಕಲಾಕೃತಿ!. ಪ್ರಕೃತಿಯೂ ಅದ್ಭುತ ಕಲಾವಿದನಲ್ಲವೇ?!!
ನಾಗರಾಜ ಅಡಿಗ, ಕೈಗಾ ಅಣು ವಿದ್ಯುತ್ ಕೇಂದ್ರ, ಕೈಗಾ.
ನಾಗರಾಜ ಅಡಿಗ, ಕೈಗಾ ಅಣು ವಿದ್ಯುತ್ ಕೇಂದ್ರ, ಕೈಗಾ.
No comments:
Post a Comment