ಕೋಳಿ ಕೂಗಿದಾಗ ಎದ್ದೇಳುವ ಕಾಲದಲ್ಲಿ ಮನೆಯಲ್ಲಿದದ್ದು ಒಂದೇ ಕೀ ಕೊಟ್ಟಿಡುವ ಅಲಾರಾಂ. ಪಿ ಯು ಸಿ ಓದುತ್ತಿದ್ದ ಮಗನಿಗೆ ಬೇಗ ಏಳಬೇಕೆಂದು ಇಟ್ಟ ಅಲಾರಾಂ ಎಸ್ ಎಸ್ ಎಲ್ ಸಿ ಓದುತ್ತಿದ್ದ ಮಗಳನ್ನು ಏಳಿಸುತ್ತಿತು. ಮಗಳು ತನ್ನ ಕನಸನ್ನು ನನಸಾಗಿಸಲು ಓದಲು ಶುರುಮಾಡುತಿದ್ದಳು. ಮಗಳು ಓದುವುದನ್ನು ತೆಡೆಯುವುದಕ್ಕೊಂದೇ ಉಪಾಯ.... ಅಪ್ಪ ಅಲಾರಾಂ ಇಡದೆ, ಬೆಳಿಗ್ಗೆ ಎಚ್ಚರದಾಕ್ಷಣ ಮಗನನ್ನು ಮಾತ್ರ ಏಳಿಸುತ್ತಿದ್ದ....!!!